ಕನ್ನಡದಲ್ಲಿ ಕಾಗುಣಿತ ದೋಷಗಳನ್ನು ಸರಿಪಡಿಸುವ ತಾಂತ್ರಿಕ ಸಾಧನದ ಅಗತ್ಯತೆಗಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಇ-ಆಡಳಿತ ಕೇಂದ್ರದ ಇ-ಕನ್ನಡ ಯೋಜನೆಯು ಕನ್ನಡ ಕಾಗುಣಿತ ಪರಿಶೀಲ‌ನಾ ಸಾಧನವನ್ನು ಅಭಿವೃದ್ಧಿಪಡಿಸಿದೆ. ಕಾಗುಣಿತ ಪರಿಶೀಲನಾ ಸಾಧನವು ಕನ್ನಡ ಪಠ್ಯದಲ್ಲಿನ ಕಾಗುಣಿತ ದೋಷಗಳನ್ನು ಪರಿಶೀಲಿಸುವ ಹಾಗೂ ಅವುಗಳನ್ನು ಸರಿಪಡಿಸಲು ನೆರವಾಗುವ ತಂತ್ರಾಂಶವಾಗಿದೆ. ಪಠ್ಯದಲ್ಲಿನ ದೋಷಗಳನ್ನು ಗುರುತಿಸಿ, ಬಳಕೆದಾರರಿಗೆ ದೋಷ ಮುಕ್ತ ಪಠ್ಯವನ್ನು ಸಿದ್ಧಪಡಿಸಲು ಈ ತಂತ್ರಾಂಶವು ಸಹಾಯ ಮಾಡುತ್ತದೆ. ಹಸ್ತಚಾಲಿತವಾಗಿ ಕನ್ನಡ ಪಠ್ಯವನ್ನು ಪರಿಷ್ಕರಣೆ ಮಾಡಲು ತಗುಲುವ ಸಮಯ ಮತ್ತು ಪರಿಶ್ರಮವನ್ನು ಈ ಸಾಧನ ಕಡಿಮೆ ಮಾಡುತ್ತದೆ.
Due to the need for a technical tool to correct spelling errors in the Kannada language, the E-Kannada project, the Department of Personnel and Administrative Reforms (e-governance) has developed a Kannada spell-checking tool. Spell Checker is an application that checks and corrects spelling errors in Kannada. This application helps the user to prepare error-free text by identifying the errors in the text. This tool reduces the time and effort involved in correcting Kannada text manually.